ಅಂತರಾಷ್ಟ್ರೀಯಯೋಗದಿನದಮಹತ್ವ



ವಿಶ್ವಕ್ಕೆ ಭಾರತದ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವೂ ಒಂದು. ನಮ್ಮ ಪ್ರಾಚೀನ ಕಾಲದಲ್ಲೇ ಋಷಿ ಮುನಿಗಳು ಯೋಗದ ಮೂಲಕ ಆರೋಗ್ಯ, ಆಧ್ಯಾತ್ಮಿಕ ಉನ್ನತಿ ಪಡೆಯುತ್ತಿದ್ದರು. ಇದು ಭಾರತದ ಹೆಮ್ಮೆಯ ಪರಂಪರೆಗಳಲ್ಲಿ ಒಂದಾಗಿದೆ.    ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UN) ಮಾಡಿದ ಭಾಷಣದಲ್ಲಿ ಜಾಗತಿಕ ಸಾಮರಸ್ಯಕ್ಕಾಗಿ ಯೋಗದ ಪ್ರಯೋಜನಗಳನ್ನು ಹೇಳಿ ಅಂತರರಾಷ್ಟ್ರೀಯ ಯೋಗದಿನವನ್ನು ಪ್ರಸ್ತಾಪಿಸಿದರು. ಅವರ ಪ್ರಸ್ತಾವನೆಗೆ ಅಗಾಧ ಬೆಂಬಲ ದೊರೆಯಿತು ವಿಶ್ವಸಂಸ್ಥೆಯ – 177 ಸದಸ್ಯ ರಾಷ್ಟ್ರಗಳು ಈ ನಿರ್ಣಯವನ್ನು ಒಪ್ಪಿಕೊಂಡರು, ಇದು ವಿಶ್ವಸಂಸ್ಥೆಯ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾಗಿ ಬೆಂಬಲಿತ ನಿರ್ಣಯಗಳಲ್ಲಿ ಒಂದಾಗಿದೆ. ಯೋಗದ ಸಾರ್ವತ್ರಿಕ ಆಕರ್ಷಣೆಯನ್ನು ಗುರುತಿಸಿ, ವಿಶ್ವಸಂಸ್ಥೆಯು 2014ರಲ್ಲಿ, ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು (IDY) ಅಧಿಕೃತವಾಗಿ ಘೋಷಿಸಿತು. 2015 ರಿಂದ, ಅಂತಾರಾಷ್ಟ್ರೀಯ ಯೋಗ ದಿನವನ್ನು ಇಡೀ ಜಗತ್ತಿನಲ್ಲಿ ಆಚರಿಸಲಾಗುತ್ತಿದೆ. ಈ ದಿನದ ಉದ್ದೇಶ, ಯೋಗದ ಮೂಲಕ ಶಾಂತಿ, ಆರೋಗ್ಯ ಮತ್ತು ಒಗ್ಗಟ್ಟನ್ನು ಪ್ರೋತ್ಸಾಹಿಸುವುದು. ಯೋಗದ ವಿಶೇಷತೆ ಅಂದ್ರೆ – ಎಲ್ಲಾ ವಯಸ್ಸಿನ, ಸಂಸ್ಕೃತಿಯ, ಮತ್ತು ಹಿನ್ನೆಲೆಯ ಜನರು ಇದನ್ನು ಅಭ್ಯಾಸ ಮಾಡಬಹುದು. ಯೋಗ ಜನರನ್ನು ಒಟ್ಟುಗೂಡಿಸಿ, ಆರೋಗ್ಯಕರ ಮತ್ತು ಶಾಂತ ಜೀವನದತ್ತ ಕರೆದೊಯ್ಯುತ್ತದೆ.

2017ರ ಸಮೀಕ್ಷೆಯ ಪ್ರಕಾರ, ಅಮೆರಿಕದ ಸುಮಾರು 14% ವಯಸ್ಕರು ಯೋಗ ಮತ್ತು ಧ್ಯಾನವನ್ನು ತಮ್ಮ ದಿನಚರಿಯ ಅವಿಭಾಜ್ಯಅಂಗವಾಗಿ ಮಾಡಿಕೊಂಡಿದ್ದಾರೆ. ಯೋಗದ ವೈಜ್ಞಾನಿಕ ಅಧ್ಯಯನಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಅದರ ಜನಪ್ರಿಯತೆಯನ್ನು ಹೆಚ್ಚಿಸಿದೆ.  ತಂತ್ರಜ್ಞಾನದ ಯುಗದಲ್ಲೂ ಯೋಗವು ದೈಹಿಕ ಸ್ಥಿರತೆ, ಆರೋಗ್ಯ ಹಾಗೂ ಮನಸಿನ ಸಂತುಷ್ಟಿಗೆ ಸಹಾಯ ಮಾಡುವ ಅಭ್ಯಾಸವಾಗಿ ಪರಿಗಣಿಸಲಾಗುತ್ತಿದೆ. ಜನರು ತಮ್ಮ ದೈನಂದಿನ ಒತ್ತಡ ಮತ್ತು ಆಧುನಿಕ ಜೀವನಶೈಲಿಯ ಪರಿಣಾಮಗಳನ್ನು ಸಮತೋಲಿಸಲು ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಮೆರಿಕಾ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಅನೇಕ ಇತರೆ ದೇಶಗಳಲ್ಲಿ ಯೋಗವು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ, ಇದೇ ಕಾರಣದಿಂದ, ಯೋಗವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸುಧಾರಣೆ, ಮಾನಸಿಕ ಮತ್ತು ಶಾರೀರಿಕ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಒಂದು ಶ್ರೇಷ್ಠ ಆಯ್ಕೆ ಎನ್ನಿಸಿಕೊಳ್ಳುತ್ತಿದೆ.

ಅಂತರಾಷ್ಟ್ರೀಯ ಯೋಗ ದಿನವನ್ನು ಈ ವರ್ಷದ ವಿಷಯ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎನ್ನುವುದು ಮಾನವನೂ ಸಹಜವಾಗಿ ಪ್ರಕೃತಿಯೊಂದಿಗೆ ಒಕ್ಕೂಟದ ಜೀವನ ನಡೆಸಬೇಕೆಂಬ ಸಂದೇಶ ನೀಡುತ್ತದೆ. ಆದರೆ, ಯೋಗವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ, ಪ್ರತಿದಿನವೂ ಇದನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಅಭ್ಯಾಸ ಮಾಡುವ ಅಗತ್ಯವಿದೆ. ನಾವೆಲ್ಲರು ಯೋಗಾಭ್ಯಾಸದಲ್ಲಿ ನಿಷ್ಠೆಯಿಂದ ತೊಡಗಿ, ಇತರರಿಗೂ ಪ್ರೇರಣೆ ನೀಡೋಣ.

ನಿಖಿಲ್ ಶ್ರೀನಿವಾಸ್.
ಶಾಶ್ವತ ಮುದಾ (Śhāśvata mudā)

Comments

Popular posts from this blog

Carnatic Music: A Journey Through Melody and Emotion

Bhaja Govindam – Verse 31